ಪ್ರಾಪರ್ಟಿ ಮೇಲಿನ ಲೋನ್ (LAP) ಇದು ನಿಮಗೆ ಹಲವಾರು ಅಗತ್ಯಗಳಿಗೆ ಗಣನೀಯ ಹಣವನ್ನು ನೀಡಬಹುದಾದ ಸುರಕ್ಷಿತ ಹಣಕಾಸು ವಿಧಾನವಾಗಿದೆ, ಆದರೆ ಇದರ ಕುರಿತಾಗಿ ಹಲವಾರು ತಪ್ಪು ಕಲ್ಪನೆಗಳಿವೆ.
ಇವುಗಳಿಗೆ ಬಲಿಯಾದರೆ ಅದನ್ನು ಪೂರ್ಣವಾಗಿ ಬಳಸುವುದರಿಂದ ಹಿಂದೆ ಉಳಿಯಬಹುದು ಮತ್ತು ಪ್ರಚೋದಕ ಮತ್ತು ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಬಹುದು. ಈ ಬ್ಲಾಗ್ ಅಂತಹ ತಪ್ಪು ಕಲ್ಪನೆಗಳನ್ನು ಹೈಲೈಟ್ ಮಾಡುವ ಮತ್ತು ನಿಜಾಂಶಗಳನ್ನು ತಿಳಿಸುವ ಗುರಿಯನ್ನು ಹೊಂದಿದೆ, ಇದರಿಂದಾಗಿ ನೀವು ನಿರ್ಧಾರ ತೆಗೆದುಕೊಳ್ಳುವಾಗ ಸತ್ಯಗಳನ್ನು ಆಧರಿಸುತ್ತೀರಿ. ಆರಂಭಿಸೋಣ.
ನೀವು ಅಡವಿಡಲಾದ ಪ್ರಾಪರ್ಟಿಯನ್ನು ಬಳಸಲು ಸಾಧ್ಯವಿಲ್ಲ
ಇದು ಬಹುಶಃ ಪ್ರಾಪರ್ಟಿ ಮೇಲಿನ ಲೋನ್ ಕುರಿತ ಅತ್ಯಂತ ಸಾಮಾನ್ಯ ತಪ್ಪು ಕಲ್ಪನೆ. ಸಾಮಾನ್ಯವಾಗಿ, ಹಣವನ್ನು ಪಡೆಯಲು ಅಡವಿಡಲಾದ ಪ್ರಾಪರ್ಟಿಯನ್ನು ಅಡಮಾನವಾಗಿ ಬಳಸಲಾಗುವುದಿಲ್ಲ ಎಂದು ಸಾಲಗಾರರು ನಂಬುತ್ತಾರೆ. ನೀವು ಪಾವತಿಗಳ ಮೇಲೆ ಡೀಫಾಲ್ಟ್ ಮಾಡದಿದ್ದರೆ, ಪ್ರಾಪರ್ಟಿಯನ್ನು ಬಳಸುವ ಹಕ್ಕು ಹೊಂದಿರುತ್ತೀರಿ.
ಆದಾಗ್ಯೂ, ನೀವು ಪಾವತಿಗಳ ಮೇಲೆ ಡೀಫಾಲ್ಟ್ ಮಾಡಿದರೆ ಮತ್ತು ಮರುಪಾವತಿಸಲು ವಿಫಲವಾದರೆ, ಬಾಕಿಗಳನ್ನು ಮರುಪಡೆಯಲು ಸಾಲದಾತರು ಪ್ರಾಪರ್ಟಿಯನ್ನು ಮಾರಾಟ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಯಾವುದೇ ಡೀಫಾಲ್ಟ್ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಮಾಡುವುದರಿಂದ ಸಮಯಕ್ಕೆ ಸರಿಯಾಗಿ EMI ಗಳನ್ನು ಪಾವತಿಸುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಬ್ಯಾಂಕಿಗೆ ಸ್ಟ್ಯಾಂಡಿಂಗ್ ಸೂಚನೆಗಳನ್ನು ನೀಡುವ ಮೂಲಕ EMI ಗಳನ್ನು ಆಟೋಮೇಟ್ ಮಾಡುವುದು ಉತ್ತಮವಾಗಿದೆ, ಏಕೆಂದರೆ ಇದು ಡೀಫಾಲ್ಟ್‌ನ ಅವಕಾಶಗಳನ್ನು ಹೆಚ್ಚಿನ ಮಟ್ಟಿಗೆ ನಿವಾರಿಸುತ್ತದೆ.
ಫಂಡ್‌ಗಳ ಬಳಕೆಯ ಮೇಲೆ ನಿರ್ಬಂಧವಿರುತ್ತದೆ
ಪ್ರಾಪರ್ಟಿ ಮೇಲಿನ. ವೈಯಕ್ತಿಕ ಅಥವಾ ಬಿಸಿನೆಸ್ ಅಗತ್ಯಗಳಾಗಿರಲಿ, ನೀವು ಇಷ್ಟಪಡುವ ಯಾವುದೇ ಕಾನೂನುಬದ್ಧ ರೀತಿಯಲ್ಲಿ ಹಣವನ್ನು ಬಳಸಬಹುದು. ನೀವು ಇದನ್ನು ಇಲ್ಲಿ ಬಳಸಬಹುದು:
- ನಿಮ್ಮ ಬಿಸಿನೆಸ್ ವಿಸ್ತರಣೆಗಾಗಿ
- ನಿಮ್ಮ ಮಗುವಿನ ಉನ್ನತ ಶಿಕ್ಷಣಕ್ಕಾಗಿ ಪಾವತಿಸಲು
- ವರ್ಕಿಂಗ್ ಕ್ಯಾಪಿಟಲ್ ಅಗತ್ಯಗಳನ್ನು ಪೂರೈಸಲು
- ಹೊಸ ತಂತ್ರಜ್ಞಾನದ ಅಳವಡಿಕೆಗಾಗಿ
ಸಂಕ್ಷಿಪ್ತವಾಗಿ, ನಿಮ್ಮ ಇಷ್ಟದ ಪ್ರಕಾರ ನೀವು ಹಣವನ್ನು ಬಳಸಬಹುದು. ಹಾಗಿದ್ದೂ ಅದರ ಬಳಕೆಯೊಂದಿಗೆ ವಿವೇಕಯುತವಾಗಿರಲು ಸಲಹೆ ನೀಡಲಾಗುತ್ತದೆ.
ನೀವು ವಸತಿ ಪ್ರಾಪರ್ಟಿಯನ್ನು ಮಾತ್ರ ಅಡವಿಡಬಹುದು
ವಸತಿ ಪ್ರಾಪರ್ಟಿಯನ್ನು ಹೊರತುಪಡಿಸಿ, ಹಣವನ್ನು ಪಡೆಯಲು ನೀವು ವಾಣಿಜ್ಯ ಪ್ರಾಪರ್ಟಿಯನ್ನು ಕೂಡ ಅಡವಿಡಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರಾಪರ್ಟಿ ಮೇಲಿನ ಲೋನ್ ವಸತಿ ಆವರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಆದ್ದರಿಂದ, ನೀವು ವಾಣಿಜ್ಯ ಕಟ್ಟಡ ಅಥವಾ ವೇರ್‌ಹೌಸ್‌ನಲ್ಲಿ ಯಾವುದೇ ಫ್ಯಾಕ್ಟರಿ ಅಥವಾ ಕಚೇರಿಯನ್ನು ಹೊಂದಿದ್ದರೆ, ಹಣವನ್ನು ಪಡೆಯಲು ನೀವು ಅದನ್ನು ಅಡವಿಡಬಹುದು.
ನೀವು ಅಡವಿಡುವ ಯಾವುದೇ ಪ್ರಾಪರ್ಟಿಗೆ, ಪೇಪರ್‌ವರ್ಕ್ ಪೂರ್ಣವಾಗಿದೆ ಮತ್ತು ಅಪ್-ಟು-ಡೇಟ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಡಾಕ್ಯುಮೆಂಟೇಶನ್ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಯಾವುದೇ ಪ್ರಮುಖ ಪೇಪರ್ ಇಲ್ಲದಿದ್ದಲ್ಲಿ ನಿಮ್ಮ ಅಪ್ಲಿಕೇಶನ್ ಅನ್ನು ತಿರಸ್ಕರಿಸಲಾಗುತ್ತದೆ.
ಪ್ರಾಪರ್ಟಿ ಮೇಲಿನ ಲೋನ್ ಹೆಚ್ಚಿನ ಬಡ್ಡಿ ದರವನ್ನು ಹೊಂದಿದೆ
ಇಲ್ಲ. ಈ ಲೋನನ್ನು ಅಡಮಾನದಿಂದ ಬೆಂಬಲಿಸಲಾಗಿರುವುದರಿಂದ, ಬಡ್ಡಿ ದರವು ಕಡಿಮೆ ಇರುತ್ತದೆ. ಅಷ್ಟಾಗಿಯೂ ಬಡ್ಡಿ ದರವು ಸಾಲಗಾರರ ಕ್ರೆಡಿಟ್ ಸ್ಕೋರ್ ಮತ್ತು ಮರುಪಾವತಿ ಸಾಮರ್ಥ್ಯವನ್ನು ಕೂಡ ಅವಲಂಬಿಸಿರುತ್ತದೆ ಎಂಬುದು ಗಮನಾರ್ಹ.
ಉತ್ತಮ ಮರುಪಾವತಿ ಸಾಮರ್ಥ್ಯದೊಂದಿಗೆ ಹೆಚ್ಚಿನ ಸ್ಕೋರ್ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಲೋನ್ ಪಡೆಯಲು ಸಹಾಯ ಮಾಡುತ್ತದೆ. ಡೀಲ್‌ನೊಂದಿಗೆ ಮುಂದುವರಿಯುವ ಮೊದಲು ಬಡ್ಡಿ ದರಗಳನ್ನು ಹೋಲಿಕೆ ಮಾಡಲು ಸಲಹೆ ನೀಡಲಾಗುತ್ತದೆ.
ಈ ಲೋನನ್ನು ಪಡೆಯಲು ನೀವು ಹೆಚ್ಚಿನ ಆದಾಯ ಬ್ರ್ಯಾಕೆಟ್‌ನಲ್ಲಿರಬೇಕು
ಲೋನ್ ಮೊತ್ತದ ಅರ್ಹತೆಯ ವಿಷಯದಲ್ಲಿ ಆದಾಯವು ಮುಖ್ಯವಾಗಿದ್ದರೂ, ಆದಾಗ್ಯೂ, ನೀವು ಮಧ್ಯಮ-ಆದಾಯದ ಬ್ರ್ಯಾಕೆಟ್‌ನಲ್ಲಿದ್ದರೂ, ನೀವು ಈ ಲೋನನ್ನು ಪಡೆಯಬಹುದು.
ನೀವು ಮರುಪಾವತಿ ಯೋಜನೆಯನ್ನು ಹೊಂದಿರುವುದನ್ನು ಮತ್ತು ನೀವು ಪಾವತಿಗಳ ಮೇಲೆ ಡೀಫಾಲ್ಟ್ ಮಾಡುವುದಿಲ್ಲ ಎಂಬುದನ್ನು ನಿಮ್ಮ ಸಾಲದಾತರಿಗೆ ತೋರಿಸುವುದನ್ನು ಖಚಿತಪಡಿಸಿಕೊಳ್ಳಿ . ನಿಮ್ಮ ಹೊಣೆಗಾರಿಕೆಗಳನ್ನು ಕಡಿಮೆ ಇರಿಸಿ ಮತ್ತು ಲೋನ್ ಅವಧಿಯಲ್ಲಿ ನಿಮ್ಮ EMI ಗಳಲ್ಲಿ ನೀವು ಡೀಫಾಲ್ಟ್ ಮಾಡದಿರುವುದನ್ನು ಖಚಿತಪಡಿಸಿಕೊಳ್ಳಿ.
ಅಂತಿಮವಾಗಿ
ಸ್ಪರ್ಧಾತ್ಮಕ ಬಡ್ಡಿ ದರದೊಂದಿಗೆ, ಪ್ರಾಪರ್ಟಿ ಮೇಲಿನ ಲೋನ್ ನಿಮಗೆ ಹಲವಾರು ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ನಿಮ್ಮ ಪ್ರಾಪರ್ಟಿಗಳನ್ನು ಹಣಕಾಸಾಗಿ ಪರಿವರ್ತಿಸಲು ಇದು ಉತ್ತಮ ಮಾರ್ಗವಾಗಿದೆ. ಆದಾಗ್ಯೂ, ಸಹಿ ಮಾಡುವ ಮೊದಲು, ಫೈನ್ ಪ್ರಿಂಟ್ ಓದಿ, ಪ್ರಕ್ರಿಯೆ ಮತ್ತು ಇತರ ಶುಲ್ಕಗಳನ್ನು ಪರಿಗಣಿಸಿ ಮತ್ತು, ನೀವು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ. ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಗೃಹಂ ಹೌಸಿಂಗ್ ಫೈನಾನ್ಸ್‌ನಿಂದ ನೀವು ಪ್ರಾಪರ್ಟಿ ಮೇಲಿನ ಲೋನನ್ನು ಪಡೆಯಬಹುದು. ಪ್ರಾಡಕ್ಟ್ ಕೊಡುಗೆಗಳನ್ನು ತಿಳಿದುಕೊಳ್ಳಲು ಮತ್ತು ಈ ಪ್ರಾಪರ್ಟಿ ಮೇಲಿನ ಲೋನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಲು ಇಲ್ಲಿ ಕ್ಲಿಕ್ ಮಾಡಿ, ಮತ್ತು ನಿಮ್ಮ ಲೋನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಮ್ಮ ಪ್ರತಿನಿಧಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ.