ದಯವಿಟ್ಟು ಕಾನೂನು ಹಕ್ಕು ನಿರಾಕರಣೆಯ ನಿಯಮ ಮತ್ತು ಷರತ್ತುಗಳನ್ನು ("ಕಾನೂನು ಹಕ್ಕು ನಿರಾಕರಣೆಗಳು") ಎಚ್ಚರಿಕೆಯಿಂದ ಓದಿ. ಈ ಕಾನೂನು ಹಕ್ಕು ನಿರಾಕರಣೆಗಳು ನಿಮ್ಮ ಮತ್ತು ಗೃಹಂ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನಡುವೆ ಕಾನೂನುಬದ್ಧವಾದ ಒಪ್ಪಂದವಾಗಿದ್ದು, ಗೃಹಂನ ಪ್ರೊಫೈಲ್, ಮಾಹಿತಿ, ಪ್ರಾಡಕ್ಟ್‌ಗಳು ಮತ್ತು ಸೇವೆಗಳಿಗಾಗಿ www.grihumhousing.com ಅಡಿಯಲ್ಲಿ ನಿಯಮ ಮತ್ತು ಷರತ್ತುಗಳನ್ನು ಸ್ಥಾಪಿಸುತ್ತವೆ ಮತ್ತು ಅದರ ಸೇವೆಗಳನ್ನು ("ಸೇವೆಗಳು") ಪಡೆಯುವ ವಿವಿಧ ಬಳಕೆದಾರರೊಂದಿಗೆ ಸಂವಹನವನ್ನು ಸುಲಭಗೊಳಿಸುತ್ತವೆ. ಈ ವೆಬ್‌ಸೈಟ್ ಅಥವಾ ಅದರ ಯಾವುದೇ ಪುಟಗಳನ್ನು ಅಕ್ಸೆಸ್ ಮಾಡುವ ಮೂಲಕ, ಮತ್ತು/ಅಥವಾ ವೆಬ್‌ಸೈಟ್‌ನಲ್ಲಿ ಅಥವಾ ಅದರ ಮೂಲಕ ಒದಗಿಸಲಾದ ಮಾಹಿತಿ ಬಳಸುವ ಮೂಲಕ, ಅದರಲ್ಲಿ ಒಳಗೊಂಡಿರುವ ಕಾನೂನು ಹಕ್ಕು ನಿರಾಕರಣೆಗಳು ಮತ್ತು ನಿಯಮಗಳಿಗೆ ಬದ್ಧರಾಗಿರಲು ನೀವು ಒಪ್ಪುತ್ತೀರಿ. ನಿರ್ದಿಷ್ಟ ಪ್ರಾಡಕ್ಟ್‌ಗಳು ಮತ್ತು ಸೇವೆಗಳ ನಿಯಮ ಮತ್ತು ಷರತ್ತುಗಳು ಹಾಗೂ ಕಾನೂನು ಹಕ್ಕು ನಿರಾಕರಣೆಗಳ ನಡುವೆ ಯಾವುದಾದರೂ ಸಂಘರ್ಷ ಇರುವ ಸಂದರ್ಭದಲ್ಲಿ, ಅಂತಹ ಪ್ರಾಡಕ್ಟ್‌ಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ಷರತ್ತುಗಳು ಮೇಲುಗೈ ಸಾಧಿಸುತ್ತವೆ. ಮೇಲಿನ ಯಾವುದೇ ಕಾನೂನು ಹಕ್ಕು ನಿರಾಕರಣೆಗಳನ್ನು ನೀವು ಒಪ್ಪದಿದ್ದರೆ, ದಯವಿಟ್ಟು ಗೃಹಂನ ಯಾವುದೇ ಪೇಜ್‌ಗಳಲ್ಲಿ ಇರುವ ಮಾಹಿತಿ ಓದಬೇಡಿ. ಇಲ್ಲಿ ಇರುವ ನಿಯಮಗಳು, ಷರತ್ತುಗಳು ಮತ್ತು ಸೂಚನೆಗಳನ್ನು ಯಾವುದೇ ಮಾರ್ಪಾಡು ಇಲ್ಲದೆ ನೀವು ಒಪ್ಪಿದರೆ ಮಾತ್ರ ನಿಮಗೆ ಈ ವೆಬ್‌ಸೈಟ್ ನೀಡಲಾಗುತ್ತದೆ. ಈ ವೆಬ್‌ಸೈಟ್‌ನ ನಿಮ್ಮ ಬಳಕೆಯು ಅಂತಹ ಎಲ್ಲಾ ನಿಯಮಗಳು, ಷರತ್ತುಗಳು ಮತ್ತು ಕಾನೂನು ನಿರಾಕರಣೆಗಳ ಸೂಚನೆಗಳಿಗೆ ನಿಮ್ಮ ಒಪ್ಪಂದವನ್ನು ರೂಪಿಸುತ್ತದೆ.
ಈ ವೆಬ್‌ಸೈಟ್‌ನಲ್ಲಿ ಒಳಗೊಂಡಿರುವ ಮಾಹಿತಿ, ವಿಷಯ, ಸಾಮಗ್ರಿಗಳು, ಡೇಟಾ, ಸುದ್ದಿ ವಸ್ತುಗಳು, ಉತ್ಪನ್ನಗಳು (ಟೆಕ್ಸ್ಟ್, ವಿಷಯ, ಫೋಟೋಗಳು, ಗ್ರಾಫಿಕ್ಸ್, ವಿಡಿಯೋ ಮತ್ತು ಆಡಿಯೋ ವಿಷಯವನ್ನು ಒಳಗೊಂಡಂತೆ, ಆದರೆ ಅಷ್ಟಕ್ಕೇ ಸೀಮಿತವಾಗಿಲ್ಲ) ಹಣಕಾಸಿನ ಡೇಟಾ, ಸುದ್ದಿ, ಸಂಶೋಧನೆ, ಶಿಫಾರಸುಗಳು ಮತ್ತು ಅಭಿಪ್ರಾಯಗಳು ಅಥವಾ ಇತರ ಹಣಕಾಸಿನ ಮಾಹಿತಿಯನ್ನು ("ವಿಷಯ") ಸಾಮಾನ್ಯ ಮಾಹಿತಿಗಾಗಿ ಮಾತ್ರ ಒದಗಿಸಲಾಗುತ್ತದೆ ಮತ್ತು ಬಿಸಿನೆಸ್/ವಾಣಿಜ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಧಾರವಾಗಿ ಬಳಸಬಾರದು. ಈ ವೆಬ್‌ಸೈಟ್‌ನಲ್ಲಿ ಒಳಗೊಂಡಿರುವ ವಿಷಯದ ಆಧಾರದ ಮೇಲೆ ಯಾವುದೇ ಹೂಡಿಕೆ ಅಥವಾ ಹಣಕಾಸಿನ ಜವಾಬ್ದಾರಿಗೆ ಪ್ರವೇಶಿಸುವ ಮೊದಲು ಸರಿಯಾದ ಎಚ್ಚರಿಕೆ ಮತ್ತು/ಅಥವಾ ಸ್ವತಂತ್ರ ಸಲಹೆಯನ್ನು ಪಡೆಯಲು ನಿಮಗೆ ಸಲಹೆ ನೀಡಲಾಗುತ್ತದೆ. ಗೃಹಂ, ಅದರ ಗ್ರೂಪ್ ಕಂಪನಿಗಳು, ಅಂಗಸಂಸ್ಥೆಗಳು, ಪೂರೈಕೆದಾರರು, ಏಜೆಂಟ್‌ಗಳು ಅಥವಾ ಪರವಾನಗಿದಾರರು, ಅದರ ಪ್ರಾಡಕ್ಟ್‌ಗಳು ಮತ್ತು ಸೇವೆಗಳ ಮಾಹಿತಿಯ ಪ್ರಸಾರಕ್ಕಾಗಿ ಮತ್ತು ನಿಮ್ಮೊಂದಿಗೆ ಸಾಮಾನ್ಯ ಸಂವಹನದ ಸಾಧನವಾಗಿ ಗೃಹಂ ಈ ವೆಬ್‌ಸೈಟ್ ಅನ್ನು ನಿರ್ವಹಿಸುತ್ತದೆ, ಇದನ್ನು ನಿಮಗೆ ಸಲಹೆಯಾಗಿ ಯಾವುದೇ ರೀತಿಯಲ್ಲಿ ಅರ್ಥೈಸಲಾಗುವುದಿಲ್ಲ.
ಪಠ್ಯ, ಗ್ರಾಫಿಕ್ಸ್, ಲಿಂಕ್‌ಗಳು ಅಥವಾ ಇತರ ನಿಯಮಗಳನ್ನು ಒಳಗೊಂಡಂತೆ ಈ ವೆಬ್‌ಸೈಟ್‌ನಲ್ಲಿ ಒಳಗೊಂಡಿರುವ ವಿಷಯವನ್ನು "ಲಭ್ಯವಿರುವಂತೆ" ಆಧಾರದ ಮೇಲೆ ಒದಗಿಸಲಾಗುತ್ತದೆ ಮತ್ತು ಹಕ್ಕುಸ್ವಾಮ್ಯದಿಂದ ರಕ್ಷಿಸಲಾಗುತ್ತದೆ. ಗೃಹಂನ ಸ್ಪಷ್ಟ ಮತ್ತು ಮುಂಚಿತ ಲಿಖಿತ ಒಪ್ಪಿಗೆಯಿಲ್ಲದೆ ನೀವು ಇತರರಿಗೆ ಟೆಕ್ಸ್ಟ್ ಅಥವಾ ಗ್ರಾಫಿಕ್ಸ್ ವಿತರಿಸುವಂತಿಲ್ಲ. ಗೃಹಂನ ಸ್ಪಷ್ಟ ಮತ್ತು ಮುಂಚಿತ ಲಿಖಿತ ಅನುಮತಿಯಿಲ್ಲದೆ ಈ ವೆಬ್‌ಸೈಟ್‌ನಲ್ಲಿ ಒಳಗೊಂಡಿರುವ ಯಾವುದೇ ವಿಷಯವನ್ನು ನೀವು ಯಾವುದೇ ರೂಪದಲ್ಲಿ ಕಾಪಿ ಮಾಡಬಾರದು, ಡೌನ್ಲೋಡ್ ಮಾಡಬಾರದು, ಪ್ರಕಟಿಸಬಾರದು, ವಿತರಿಸಬಾರದು ಅಥವಾ ಮರುಉತ್ಪಾದಿಸಬಾರದು.
ಗೃಹಂ, ಅದರ ಗ್ರೂಪ್ ಕಂಪನಿಗಳು, ಅಂಗಸಂಸ್ಥೆಗಳು ಅಥವಾ ಅದರ ಯಾವುದೇ ಸಹವರ್ತಿಗಳ ಯೋಜನೆಗಳನ್ನು ಪಡೆಯಲು ಈ ವೆಬ್‌ಸೈಟ್‌ನ ಕಂಟೆಂಟ್ ಅನ್ನು ಆಫರ್, ಕೋರಿಕೆ, ಆಹ್ವಾನ, ಸಲಹೆ ಅಥವಾ ಶಿಫಾರಸು ಎಂದು ಪರಿಗಣಿಸಬಾರದು. ನೀವು ವೆಬ್‌ಸೈಟ್, ಪ್ರಾಡಕ್ಟ್‌ಗಳು ಮತ್ತು/ಅಥವಾ ಸೇವೆಗಳು ಅಥವಾ ಈ ವೆಬ್‌ಸೈಟ್ ಮೂಲಕ ಲಭ್ಯವಿರುವ ಯಾವುದೇ ಮಾಹಿತಿಗಳನ್ನು ಅವಲಂಬಿಸಿದರೆ, ನೀವು ನಿಮ್ಮದೇ ಅಪಾಯದಲ್ಲಿ ಹಾಗೆ ಮಾಡುತ್ತೀರಿ. ಈ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಮಾಹಿತಿ, ಪ್ರಾಡಕ್ಟ್‌ಗಳು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ವಿಳಂಬಗಳು, ಲೋಪಗಳು, ಅಡಚಣೆಗಳು, ತಪ್ಪುಗಳು ಮತ್ತು/ಅಥವಾ ಇತರ ಸಮಸ್ಯೆಗಳು ಇರಬಹುದು ಎಂದು ನೀವು ಅರ್ಥಮಾಡಿಕೊಳ್ಳುತ್ತೀರಿ ಮತ್ತು ಅಂಗೀಕರಿಸುತ್ತೀರಿ.
ಈ ವೆಬ್‌ಸೈಟ್‌ನಲ್ಲಿ ವಿವರಿಸಲಾದ ಪ್ರಾಡಕ್ಟ್‌ಗಳು ಅಥವಾ ಸೇವೆಗಳ ಬಳಕೆಗೆ ಕೆಲವು ದೇಶಗಳಲ್ಲಿ ಅನುಮತಿ ಇರುವುದಿಲ್ಲ ಮತ್ತು ಅದರ ಬಗ್ಗೆ ಸಂದೇಹವಿದ್ದರೆ, ಅಂತಹ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಹೆಚ್ಚಿನ ಮಾಹಿತಿ ವಿನಂತಿಸುವ ಮುಂಚೆ ನೀವು ನಿಮ್ಮ ಸ್ಥಳೀಯ ನಿಯಂತ್ರಕ ಅಥವಾ ಪ್ರಾಧಿಕಾರದೊಂದಿಗೆ ಪರಿಶೀಲಿಸಬೇಕು. ಯಾವುದೇ ಪ್ರಾಡಕ್ಟ್‌ಗಳು ಮತ್ತು ಸೇವೆಗಳು, ಅವುಗಳನ್ನು ನೀಡಲಾಗುವ ಪ್ರಾಡಕ್ಟ್‌ಗಳು ಮತ್ತು ಸೇವೆಗಳ ವೈಯಕ್ತಿಕ ಒಪ್ಪಂದದ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ಗೃಹಂನ ಸ್ವಂತ ವಿವೇಚನೆಯ ಮೇರೆಗೆ ಮಾತ್ರ ಸಿಗುತ್ತವೆ, ಮತ್ತು ಅಂತಹ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಯಾವುದೇ ಸೂಚನೆ ಇಲ್ಲದೆ ಯಾವುದೇ ಸಮಯದಲ್ಲಿ ವಿತ್‌ಡ್ರಾ ಮಾಡಬಹುದು ಅಥವಾ ತಿದ್ದುಪಡಿ ಮಾಡಬಹುದು. ಎಲ್ಲಾ ಸ್ಥಳಗಳಲ್ಲಿ ಪೂರ್ಣ ಶ್ರೇಣಿಯ ಪ್ರಾಡಕ್ಟ್‌ಗಳು ಅಥವಾ ಸೇವೆಗಳು ಲಭ್ಯ ಇಲ್ಲದೇ ಇರಬಹುದು.
ವೆಬ್‌ಸೈಟ್‌ನಲ್ಲಿ ಸೇರಿಸಲಾದ ಅಥವಾ ಲಭ್ಯವಿರುವ ಮಾಹಿತಿಯಲ್ಲಿ ತಪ್ಪುಗಳು ಅಥವಾ ಅಕ್ಷರ ದೋಷಗಳು ಇರಬಹುದು. ಈ ವೆಬ್‌ಸೈಟ್‌ನಲ್ಲಿ ಪ್ರಸಾರವಾದ ಮಾಹಿತಿಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಗೃಹಂ ಸಂಪೂರ್ಣ ಪ್ರಯತ್ನ ಮಾಡಿದ್ದರೂ, ಯಾವುದೇ ದೋಷಗಳು ಆಕಸ್ಮಿಕವಾಗಿರುತ್ತವೆ ಮತ್ತು ಅಜಾಗರೂಕತೆಯಿಂದ ಆಗಿರುತ್ತವೆ.
ಗೃಹಂ, ಅದರ ಗ್ರೂಪ್ ಕಂಪನಿಗಳು, ಅಂಗಸಂಸ್ಥೆಗಳು, ಸಹವರ್ತಿಗಳು, ಪೂರೈಕೆದಾರರು, ಏಜೆಂಟ್‌ಗಳು ಅಥವಾ ಪರವಾನಗಿದಾರರು ಸೇವೆ ಅಥವಾ ಆ ಸೇವೆಯ ಮೂಲಕ ಉಲ್ಲೇಖಿಸಲಾದ, ಜಾಹೀರಾತು ಮಾಡಿದ ಅಥವಾ ಮಾರಾಟವಾಗುವ ಯಾವುದೇ ಮಾಹಿತಿ, ಸರಕು ಅಥವಾ ಸೇವೆಗಳ ನಿಖರತೆ, ಪರಿಪೂರ್ಣತೆ, ಸತ್ಯಾಸತ್ಯತೆ, ಉಲ್ಲಂಘನೆ-ಮುಕ್ತತೆ, ವ್ಯಾಪಾರ ಸೂಕ್ತತೆ ಅಥವಾ ನಿರ್ದಿಷ್ಠ ಉದ್ದೇಶಕ್ಕೆ ಸರಿಹೊಂದುವಿಕೆ, ಇತ್ಯಾದಿಗಳ ಬಗ್ಗೆ ಖಾತರಿ ನೀಡಲು ಸಾಧ್ಯವಿಲ್ಲ ಮತ್ತು ಖಾತರಿಪಡಿಸುವುದಿಲ್ಲ. ಗೃಹಂ, ಅದರ ಗ್ರೂಪ್ ಕಂಪನಿಗಳು, ಅಂಗಸಂಸ್ಥೆಗಳು, ಸಹವರ್ತಿಗಳು, ಪೂರೈಕೆದಾರರು, ಏಜೆಂಟ್‌ಗಳು ಅಥವಾ ಪರವಾನಗಿದಾರರು ಸಂಬಂಧಪಟ್ಟ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಈ ಮಾಹಿತಿಯು ದೋಷಮುಕ್ತ ಆಗಿರುತ್ತದೆ ಅಥವಾ ನಿರಂತರವಾಗಿ ಲಭ್ಯವಿರುತ್ತದೆ, ಅಥವಾ ಆ ಸೇವೆಯು ವೈರಸ್‌ಗಳು ಅಥವಾ ಇತರ ಹಾನಿಕಾರಕ ಘಟಕಗಳಿಂದ ಮುಕ್ತವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಗೃಹಂ, ಅದರ ಗ್ರೂಪ್ ಕಂಪನಿಗಳು, ಅಂಗಸಂಸ್ಥೆಗಳು, ಸಹವರ್ತಿಗಳು, ಪೂರೈಕೆದಾರರು, ಏಜೆಂಟ್‌ಗಳು ಅಥವಾ ಪರವಾನಗಿದಾರರು ಮಾಹಿತಿ, ಪ್ರಾಡಕ್ಟ್‌ಗಳು, ಸೇವೆಗಳಿಗೆ ಸಂಬಂಧಿಸಿದ ಎಲ್ಲಾ ವಾರಂಟಿಗಳು ಮತ್ತು ಷರತ್ತುಗಳನ್ನು ನಿರಾಕರಿಸುತ್ತಾರೆ, ಅದರಲ್ಲಿ ಎಲ್ಲಾ ಸೂಚಿತ ವಾರಂಟಿಗಳು ಮತ್ತು ವ್ಯಾಪಾರ-ಸೂಕ್ತತೆಯ ಷರತ್ತುಗಳು, ನಿರ್ದಿಷ್ಟ ಉದ್ದೇಶಕ್ಕಾಗಿ ಸೂಕ್ತತೆ, ಶೀರ್ಷಿಕೆ ಮತ್ತು ಉಲ್ಲಂಘನೆ ಮುಕ್ತತೆ ಕೂಡಾ ಒಳಗೊಂಡಿದೆ. ಈ ವೆಬ್‌ಸೈಟ್ ಮೂಲಕ ಯಾವುದೇ ಕ್ಲೈಂಟ್‌ಗೆ ಕಳುಹಿಸಲಾದ ಅಥವಾ ಈ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಯಾವುದೇ ಮಾಹಿತಿಯು ಗೃಹಂ ಅಥವಾ ಅದರ ಗ್ರೂಪ್ ಕಂಪನಿಗಳು, ಅಂಗಸಂಸ್ಥೆಗಳು ಅಥವಾ ಸಹವರ್ತಿಗಳು ಕ್ರೆಡಿಟ್ ಅರ್ಹತೆ, ಹಣಕಾಸಿನ ಕಾರ್ಯಕ್ಷಮತೆ ಅಥವಾ ನಿರೀಕ್ಷೆಗಳು, ಪರಿಹಾರ, ಅಥವಾ ಅಂತಹ ಘಟಕದಿಂದ ನಡೆಸಲಾದ ಯಾವುದೇ ಕಂಪನಿ ಅಥವಾ ಇತರ ಕಾನೂನು ಘಟಕ ಅಥವಾ ಬಿಸಿನೆಸ್‌ನ ಕಾರ್ಯಸಾಧ್ಯತೆಗೆ ಸಂಬಂಧಿಸಿದಂತೆ ಯಾವುದೇ ಪ್ರಾತಿನಿಧ್ಯ ಅಥವಾ ವಾರಂಟಿ ಸೂಚಿಸುವುದಿಲ್ಲ.
ಈ ವೆಬ್‌ಸೈಟ್‌ನಲ್ಲಿ ವಿವಿಧ ವೃತ್ತಿಪರರು/ತಜ್ಞರು/ವಿಶ್ಲೇಷಕರು ಮುಂತಾದವರ ಸಲಹೆ/ಅಭಿಪ್ರಾಯಗಳು ಮತ್ತು ಸ್ಟೇಟ್‌ಮೆಂಟ್‌ಗಳು ಇರಬಹುದು. ಗೃಹಂ ಅಂತಹ ವ್ಯಕ್ತಿಯ ಯಾವುದೇ ಅಭಿಪ್ರಾಯಗಳು/ಸ್ಟೇಟ್‌ಮೆಂಟ್‌ಗಳು/ಮಾಹಿತಿಯ ನಿಖರತೆ, ವಿಶ್ವಾಸಾರ್ಹತೆಯನ್ನು ಪ್ರತಿನಿಧಿಸುವುದಿಲ್ಲ/ಅನುಮೋದಿಸುವುದಿಲ್ಲ. ಈ ಸ್ಟೇಟ್‌ಮೆಂಟ್‌ಗಳನ್ನು ಅವಲಂಬಿಸುವುದು ಈ ವೆಬ್‌ಸೈಟ್ ಬಳಕೆದಾರರ ಸ್ವಂತ ಅಪಾಯದಲ್ಲಿರುತ್ತದೆ. ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಯಾವುದೇ ಅಭಿಪ್ರಾಯಗಳು, ಸೇವೆಗಳು ಅಥವಾ ಇತರ ಮಾಹಿತಿಯ ನಿಖರತೆ, ಪರಿಪೂರ್ಣತೆ, ವಿಶ್ವಾಸಾರ್ಹತೆ ಮತ್ತು ಉಪಯುಕ್ತತೆಯನ್ನು ಸ್ವತಂತ್ರವಾಗಿ ಪರಿಶೀಲಿಸುವುದು ಮತ್ತು ಮೌಲ್ಯಮಾಪನ ಮಾಡುವುದು ಈ ವೆಬ್‌ಸೈಟ್‌ನ ಬಳಕೆದಾರರ ಜವಾಬ್ದಾರಿ. ಈ ವೆಬ್‌ಸೈಟ್‌ನಲ್ಲಿನ ಎಲ್ಲಾ ಮಾಹಿತಿಯನ್ನು ಕಾನೂನು, ಅಕೌಂಟಿಂಗ್, ತೆರಿಗೆ, ಹಣಕಾಸು, ಹೂಡಿಕೆ ಅಥವಾ ಇತರ ವೃತ್ತಿಪರ ಸಲಹೆಯಾಗಿ ಅಥವಾ ನಿರ್ದಿಷ್ಟ ಸಂಗತಿಗಳು ಅಥವಾ ವಿಷಯಗಳ ಬಗ್ಗೆ ಸಲಹೆಯಾಗಿ ಅರ್ಥೈಸಲಾಗುವುದಿಲ್ಲ ಅಥವಾ ಅವಲಂಬಿಸುವುದಿಲ್ಲ ಎಂಬ ಷರತ್ತು ಮತ್ತು ತಿಳುವಳಿಕೆಯ ಅಡಿಯಲ್ಲಿ ಅದನ್ನು ಒದಗಿಸಲಾಗುತ್ತಿದೆ.
ಯಾವುದೇ ಸಮಯದಲ್ಲಿ ಯಾವುದೇ ಸೂಚನೆ ನೀಡದೆಯೇ ಗೃಹಂ (ಹಾಗೆ ಮಾಡಲು ಯಾವುದೇ ಬದ್ಧತೆ ಇಲ್ಲದಿದ್ದರೂ) ಈ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಯಾವುದೇ ಮಾಹಿತಿಯ ಸಂಪೂರ್ಣ ಅಥವಾ ಭಾಗಶಃ ಅಪ್‌ಡೇಟ್, ತಿದ್ದುಪಡಿ, ಬದಲಾವಣೆ ಮತ್ತು ಅಥವಾ ನಿರ್ಮೂಲನೆ ಮಾಡಬಹುದು ಹಾಗೂ ಆನಂತರ ಯಾವುದೇ ನಷ್ಟ, ಹಾನಿ ಮತ್ತು ಅಥವಾ ಹೊಣೆಗಾರಿಕೆಗೆ ಕಾರಣವಾಗಬಹುದಾದ ಎಲ್ಲಾ ಅಥವಾ ಯಾವುದೇ ಕ್ರಮಗಳಿಗೆ ಅದು ಜವಾಬ್ದಾರವಾಗಿರುವುದಿಲ್ಲ. ಇಲ್ಲಿ ಒಳಗೊಂಡಿರುವ ಯಾವುದನ್ನೂ ಯಾವುದೇ ಪ್ರಾಡಕ್ಟ್ ಅಥವಾ ಪ್ರಕ್ರಿಯೆ ಬಳಸಲು ಶಿಫಾರಸು ಎಂದು ಪರಿಗಣಿಸಬಾರದು ಮತ್ತು ಅದರ ಬಳಕೆಯು ಯಾವುದೇ ಬೌದ್ಧಿಕ ಪ್ರಾಪರ್ಟಿ ಉಲ್ಲಂಘನೆ ಅಥವಾ ಇತರ ರೀತಿಯ ಉಲ್ಲಂಘನೆಗೆ ಕಾರಣವಾಗುವುದಿಲ್ಲ ಎಂದು ಗೃಹಂ ಯಾವುದೇ ಪ್ರತ್ಯಕ್ಷ ಅಥವಾ ಪರೋಕ್ಷ ಪ್ರಾತಿನಿಧ್ಯ ಅಥವಾ ವಾರಂಟಿ ನೀಡುವುದಿಲ್ಲ. ಬಳಕೆದಾರರು ಈ ವೆಬ್‌ಸೈಟ್‌ನಲ್ಲಿ ಮಾಡಿದ ಯಾವುದೇ ಬದಲಾವಣೆಗಳು ಮತ್ತು ಅದರಲ್ಲಿ ಲಭ್ಯವಿರುವ ಮಾಹಿತಿಯ ಬಗ್ಗೆ ಆಗಾಗ್ಗೆ ತಿಳಿದುಕೊಳ್ಳುವ ಗ್ರಾಹಕರು ತಿಳಿದುಕೊಳ್ಳಬೇಕು ಎಂಬ ನಿರೀಕ್ಷೆಯಿದೆ ಮತ್ತು ಅಂತಹ ಯಾವುದೇ ಬದಲಾವಣೆಗಳ ಬಗ್ಗೆ ಬಳಕೆದಾರರಿಗೆ ಸಲಹೆ ನೀಡುವ ಬಗ್ಗೆ ಗೃಹಂ ಯಾವುದೇ ಜವಾಬ್ದಾರಿ ವಹಿಸುವುದಿಲ್ಲ. ಈ ವೆಬ್‌ಸೈಟ್‌ನಲ್ಲಿ ಒಳಗೊಂಡಿರುವ ಮಾಹಿತಿಯನ್ನು ತಾನು ವಿಶ್ವಾಸಾರ್ಹವೆಂದು ಭಾವಿಸುವ ಮೂಲಗಳಿಂದ ಪಡೆಯಲು ಗೃಹಂ ಪ್ರಯತ್ನಿಸುತ್ತದೆಯಾದರೂ, ಗೃಹಂ ಅಂತಹ ಮಾಹಿತಿಯ ಪರಿಪೂರ್ಣತೆ ಅಥವಾ ನಿಖರತೆ ಖಾತರಿಪಡಿಸುವುದಿಲ್ಲ.
ಗೃಹಂ, ಅದರ ಸಮೂಹ ಕಂಪನಿಗಳು, ಅಂಗಸಂಸ್ಥೆಗಳು, ಸಹವರ್ತಿ ಸಂಸ್ಥೆಗಳು, ಪೂರೈಕೆದಾರರು, ಏಜೆಂಟರು ಅಥವಾ ಪರವಾನಗಿದಾರರು ಯಾವುದೇ ಸಂದರ್ಭಗಳಲ್ಲಿ, ನಿಮಗೆ ಅಥವಾ ಇನ್ನಾವುದೇ ವ್ಯಕ್ತಿಗೆ ಆದ ಯಾವುದೇ ಹಾನಿಗಳ ಸಾಧ್ಯತೆಯ ಸಲಹೆ ನೀಡಿದ್ದರೂ ಸಹ, ಅಂತಹ ಹಾನಿಗೆ ಹೊಣೆಯಾಗಿರುವುದಿಲ್ಲ ಹಾಗೂ ಇಂತಹ ಹಾನಿಗಳಲ್ಲಿ, ಪರಿಣಾಮಕಾರಿ, ವಿಶೇಷ, ಆಕಸ್ಮಿಕ, ಪರೋಕ್ಷ, ದಂಡನಾತ್ಮಕ, ನಿದರ್ಶನೀಯ ಅಥವಾ ಯಾವುದೇ ರೀತಿಯ ಇತರ ಹಾನಿಗಳಿಗೆ ಸಂಬಂಧಿಸಿದ ಹೊಣೆಗಾರಿಕೆ ಸೇರಿದೆ, ಆದರೆ ಇವುಗಳಿಗೆ ಮಾತ್ರ ಸೀಮಿತವಾಗಿಲ್ಲ. ಈ ವೆಬ್‌ಸೈಟ್ ಮತ್ತು ಸಂಬಂಧಿತ ವೆಬ್ ಪೇಜ್‌ಗಳಲ್ಲಿ ಇರುವ ವಿಷಯವು ಸಾಮಾನ್ಯ ಮಾಹಿತಿ ಆಗಿದೆ ಮತ್ತು ಯಾವುದೇ ನಿರ್ದಿಷ್ಟ ವಿಷಯದ ಕುರಿತು ಸಲಹೆ ನೀಡುವ ಉದ್ದೇಶ ಹೊಂದಿಲ್ಲ. ಚಂದಾದಾರರು ಮತ್ತು ಬಳಕೆದಾರರು ಇಲ್ಲಿರುವ ಮಾಹಿತಿ ಆಧರಿಸಿ ಕಾರ್ಯನಿರ್ವಹಿಸುವ ಮೊದಲು ವೃತ್ತಿಪರ ಸಲಹೆ ಪಡೆಯಬೇಕು. ಯಾವುದೇ ಹಣಕಾಸು ಉತ್ಪನ್ನ ಅಥವಾ ಅವಕಾಶ ಅಥವಾ ಯಾವುದೇ ಉತ್ಪನ್ನ ಅಥವಾ ಸೇವೆಯ ಸ್ವರೂಪ, ಸೂಕ್ತತೆ, ಆಯ್ಕೆ ಅಥವಾ ಸಾಮರ್ಥ್ಯದ ಕುರಿತಾದ ನಿರ್ಧಾರವು ಯಾವಾಗಲೂ ಚಂದಾದಾರರು ಮತ್ತು ಬಳಕೆದಾರರ ಸಂಪೂರ್ಣ ಜವಾಬ್ದಾರಿ ಮತ್ತು ನಿರ್ಧಾರವಾಗಿರುತ್ತದೆ.
ಈ ವೆಬ್‌ಸೈಟ್ ಬಳಸುವಾಗ ನೀವು ಕಟ್ಟುನಿಟ್ಟಾಗಿ ವಾಣಿಜ್ಯೇತರ ಮತ್ತು ವೈಯಕ್ತಿಕ ಬಳಕೆಗಾಗಿ ವೆಬ್‌ಸೈಟ್‌ನಲ್ಲಿ ಯಾವುದೇ ಡೌನ್‌ಲೋಡ್ ಮಾಡಬಹುದಾದ ವಸ್ತುಗಳನ್ನು ಡೌನ್‌ಲೋಡ್ ಮಾಡಬಹುದು, ಆದರೆ ಹಾಗೆ ಮಾಡುವಾಗ ನೀವು ಎಲ್ಲಾ ಹಕ್ಕುಸ್ವಾಮ್ಯ ಮತ್ತು ಸಾಮಗ್ರಿಗಳ ಮೇಲೆ ಒಳಗೊಂಡಿರುವ ಇತರ ಮಾಲೀಕತ್ವದ ಸೂಚನೆಗಳಲ್ಲಿ ಯಾವುದೇ ಹಕ್ಕುಗಳ ಭಂಗ ಅಥವಾ ಉಲ್ಲಂಘನೆ ಮಾಡಬಾರದು. ಈ ವೆಬ್‌ಸೈಟ್ ಬಳಸುವ ಮೂಲಕ ಡೌನ್‌ಲೋಡ್ ಮಾಡಲಾದ ಅಥವಾ ಪಡೆಯಲಾದ ಯಾವುದೇ ವಸ್ತುಗಳನ್ನು ನಿಮ್ಮ ಸ್ವಂತ ವಿವೇಚನೆ ಮತ್ತು ಅಪಾಯದ ಮೇರೆಗೆ ಮಾಡಲಾಗುತ್ತದೆ ಮತ್ತು ಅಂತಹ ಯಾವುದೇ ವಸ್ತುಗಳನ್ನು ಡೌನ್‌ಲೋಡ್ ಮಾಡುವುದರಿಂದ ನಿಮ್ಮ ಕಂಪ್ಯೂಟರ್ ಸಿಸ್ಟಮ್‌ಗೆ ಉಂಟಾಗುವ ಯಾವುದೇ ಹಾನಿ, ಡೇಟಾ ನಷ್ಟ ಮತ್ತು ಪ್ರಾಪರ್ಟಿಯ ನಷ್ಟ ಅಥವಾ ಇತರೆ ರೀತಿಯ ಯಾವುದೇ ನಷ್ಟ ಅಥವಾ ಹಾನಿಗೆ ಗೃಹಂ ಹೊಣೆಯಾಗಿರುವುದಿಲ್ಲ.
ಆದರೂ, ಗೃಹಂನ ಪೂರ್ವ ಲಿಖಿತ ಅನುಮತಿಯಿಲ್ಲದೆ ಪಠ್ಯ, ಚಿತ್ರಗಳು, ಆಡಿಯೋ ಮತ್ತು ವಿಡಿಯೋ ಸೇರಿದಂತೆ ಈ ವೆಬ್‌ಸೈಟ್‌ನ ವಿಷಯಗಳನ್ನು ಸಾರ್ವಜನಿಕ ಅಥವಾ ವಾಣಿಜ್ಯ ಉದ್ದೇಶಗಳಿಗಾಗಿ ನೀವು ವಿತರಿಸಬಾರದು, ಮಾರ್ಪಡಿಸಬಾರದು, ರವಾನಿಸಬಾರದು, ಮರುಬಳಕೆ ಮಾಡಬಾರದು, ವರದಿ ಮಾಡಬಾರದು ಅಥವಾ ಬಳಸಬಾರದು.
ವೆಬ್‌ಸೈಟ್‌ನ ನಿಮ್ಮ ಅಕ್ಸೆಸ್ ಮತ್ತು ಬಳಕೆಯು www.grihumhousing.com/terms-and-conditions ("ನಿಯಮ ಮತ್ತು ಷರತ್ತುಗಳು"), www.grihumhousing.com/privacy-policy ("ಗೌಪ್ಯತಾ ನೀತಿ") ನಲ್ಲಿ ಲಭ್ಯವಿರುವ ಗೌಪ್ಯತಾ ನೀತಿ ಮತ್ತು ಎಲ್ಲಾ ಅನ್ವಯವಾಗುವ ಕಾನೂನುಗಳು, ನಿಯಮಗಳು, ನಿಬಂಧನೆಗಳು, ನೋಟಿಫಿಕೇಶನ್ ಮತ್ತು ಸರ್ಕ್ಯುಲರ್‌ಗಳಿಗೆ ಒಳಪಟ್ಟಿರುತ್ತದೆ. ವೆಬ್‌ಸೈಟನ್ನು ಅಕ್ಸೆಸ್ ಮಾಡುವ ಮೂಲಕ ಮತ್ತು ಬ್ರೌಸ್ ಮಾಡುವ ಮೂಲಕ, ಮಿತಿ ಅಥವಾ ಅರ್ಹತೆ, ನಿಯಮ ಮತ್ತು ಷರತ್ತುಗಳಿಲ್ಲದೆ ನೀವು ಅಂಗೀಕರಿಸುತ್ತೀರಿ ಮತ್ತು ಗೃಹಂನ ಗೌಪ್ಯತಾ ನೀತಿಗೆ ಬದ್ಧರಾಗಿರಲು ಒಪ್ಪುತ್ತೀರಿ.
ವಿಷಯ ಮತ್ತು ಟ್ರೇಡ್‌ಮಾರ್ಕ್‌ಗಳು, ಸೇವಾ ಗುರುತುಗಳು, ಟ್ರೇಡ್ ಹೆಸರುಗಳು, ಐಕಾನ್‌ಗಳು ಮತ್ತು ಅದರಲ್ಲಿ ಒಳಗೊಂಡಿರುವ ಲೋಗೋಗಳು ("ಗುರುತುಗಳು") ಹಾಗೂ "ಗೃಹಂ" ಮತ್ತು ಗೃಹಂ ಲೋಗೋಗಳು ಒಳಗೊಂಡಂತೆ ಆದರೆ ಅಷ್ಟಕ್ಕೇ ಸೀಮಿತವಾಗದೇ ಗೃಹಂ ಮಾಲೀಕತ್ವದಲ್ಲಿವೆ. ಇದಲ್ಲದೆ, ವೆಬ್‌ಸೈಟ್‌ನಲ್ಲಿ ಬಳಸಲಾಗುವ ಎಲ್ಲಾ ಕಂಟೆಂಟ್ ಮತ್ತು ಚಿತ್ರಗಳು ಗೃಹಂ ಮಾಲೀಕತ್ವದಲ್ಲಿವೆ ಮತ್ತು ಪರವಾನಗಿ ಪಡೆದಿವೆ ಹಾಗೂ ಅದರ ಯಾವುದೇ ಅನಧಿಕೃತ ಬಳಕೆಯನ್ನು ನಿಷೇಧಿಸಲಾಗಿದೆ. ಗೃಹಂ, ಅದರ ಗ್ರೂಪ್ ಕಂಪನಿಗಳು, ಅಂಗಸಂಸ್ಥೆಗಳು ಅಥವಾ ಸಹವರ್ತಿಗಳು ಆಯಾ ಪ್ರಾಡಕ್ಟ್‌ಗಳು ಮತ್ತು ಸೇವೆಗಳ ಹೆಸರುಗಳ ಮಾಲೀಕ(ರು) ಆಗಿವೆ ಹಾಗೂ ಅವರು ಅಂತಹ ಹೆಸರುಗಳಲ್ಲಿ ನಿಹಿತವಾದ ಟ್ರೇಡ್‌ಮಾರ್ಕ್‌ಗಳು ಮತ್ತು ಹಕ್ಕುಸ್ವಾಮ್ಯವನ್ನು ಒಳಗೊಂಡಂತೆ ಮತ್ತು ಅದಕ್ಕೆ ಸೀಮಿತವಾಗಿರದಂತೆ ಬೌದ್ಧಿಕ ಪ್ರಾಪರ್ಟಿಯ ಪೂರ್ವ ಬಳಕೆ/ನೋಂದಾಯಿತ ಮಾಲೀಕರಾಗಿ ತಮ್ಮ ಹಕ್ಕುಗಳನ್ನು ಕಾಯ್ದಿರಿಸುತ್ತಾರೆ. ಟ್ರೇಡ್‌ಮಾರ್ಕ್ ಅಥವಾ ಹಕ್ಕುಸ್ವಾಮ್ಯ ಒಳಗೊಂಡಂತೆ ಆದರೆ ಅಷ್ಟಕ್ಕೇ ಸೀಮಿತವಾಗದೇ ಇಲ್ಲಿ ಒಳಗೊಂಡಿರುವ ಯಾವುದನ್ನೂ ತನ್ನ ಬೌದ್ಧಿಕ ಪ್ರಾಪರ್ಟಿಯಲ್ಲಿ ಗೃಹಂನ ಹಕ್ಕುಗಳ ಯಾವುದೇ ಪರವಾನಗಿ, ನಿಯೋಜನೆ, ವರ್ಗಾವಣೆ ಒದಗಿಸಿದ ಹಾಗೆ ಪರಿಗಣಿಸುವಂತಿಲ್ಲ. ವೆಬ್‌ಸೈಟ್‌ನಲ್ಲಿ ಅಥವಾ ವೆಬ್‌ಸೈಟ್ ಮೂಲಕ ಒದಗಿಸಲಾದ ಎಲ್ಲಾ ಮಾಹಿತಿ (ಎಲ್ಲಾ ಪಠ್ಯಗಳು, ಗ್ರಾಫಿಕ್ಸ್ ಮತ್ತು ಲೋಗೋಗಳನ್ನು ಒಳಗೊಂಡಂತೆ) ಕುರಿತಾದ ಎಲ್ಲಾ ಹಕ್ಕುಗಳನ್ನು (ಹಕ್ಕುಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು, ಪೇಟೆಂಟ್‌ಗಳು ಮತ್ತು ಯಾವುದೇ ಇತರ ಬೌದ್ಧಿಕ ಪ್ರಾಪರ್ಟಿ ಹಕ್ಕುಗಳನ್ನು ಒಳಗೊಂಡಂತೆ) ಗೃಹಂ ಕಾಯ್ದಿರಿಸುತ್ತದೆ. ವೆಬ್‌ಸೈಟ್‌ನಲ್ಲಿ ಹಾಗೂ ವೆಬ್‌ಸೈಟ್ ಮೂಲಕ ಮತ್ತು ಕಂಟೆಂಟ್‌ನಲ್ಲಿ ಸ್ಪಷ್ಟವಾಗಿ ನೀಡದೇ ಇರುವ ಎಲ್ಲಾ ಹಕ್ಕುಗಳನ್ನು ಗೃಹಂ ಕಾಯ್ದಿರಿಸುತ್ತದೆ.
ಗೃಹಂ, ಅದರ ಗ್ರೂಪ್ ಕಂಪನಿಗಳು, ಅಂಗಸಂಸ್ಥೆಗಳು ಅಥವಾ ಸಹವರ್ತಿಗಳು ಯಾವುದೇ ಕಾರಣಕ್ಕಾಗಿ, ಯಾವುದೇ ಘಟನೆ/ಕಾರಣದೊಂದಿಗೆ ಅಥವಾ ಅದು ಇಲ್ಲದೆಯೂ ಯಾವುದೇ ಸಮಯದಲ್ಲಿ ಯಾವುದೇ ಲಿಸ್ಟಿಂಗ್ ರದ್ದುಗೊಳಿಸುವ ಹಕ್ಕನ್ನು ಕಾಯ್ದಿರಿಸುತ್ತವೆ ಮತ್ತು ಯಾವುದೇ ಸಮಯದಲ್ಲಿ, ಯಾವುದೇ ಘಟನೆ/ಕಾರಣದೊಂದಿಗೆ ಅಥವಾ ಅದು ಇಲ್ಲದೆಯೂ ಯಾರಿಗಾದರೂ ಸೇವೆಗಳಿಗೆ ಅಕ್ಸೆಸ್ ನಿಷೇಧಿಸುವ ಅಥವಾ ನಿರ್ಬಂಧಿಸುವ ಹಕ್ಕನ್ನು ಕಾಯ್ದಿರಿಸುತ್ತವೆ. ನೀವು ಈ ಸೇವೆ ಅಥವಾ ಈ ಸೇವೆಯ ಮೂಲಕ ಲಭ್ಯವಿರುವ ಯಾವುದೇ ವಸ್ತುಗಳ ಮೇಲೆ ಅವಲಂಬಿಸಿದರೆ, ಅದನ್ನು ನೀವು ನಿಮ್ಮ ಸ್ವಂತ ಅಪಾಯದಲ್ಲಿ ಮಾಡುತ್ತೀರಿ.
ಈ ವೆಬ್‌ಸೈಟ್‌ಗೆ ನೀವು ರವಾನಿಸುವ ಯಾವುದೇ ವಸ್ತು, ಮಾಹಿತಿ ಮತ್ತು ವಿಚಾರಗಳು ಗೃಹಂ, ಅದರ ಗ್ರೂಪ್ ಕಂಪನಿಗಳು, ಅಂಗಸಂಸ್ಥೆಗಳು ಮತ್ತು/ಅಥವಾ ಸಹವರ್ತಿಗಳ ಪ್ರಾಪರ್ಟಿ ಆಗಿರುತ್ತವೆ ಮತ್ತು ಪ್ರಾಪರ್ಟಿಯಾಗಿ ಉಳಿಯುತ್ತವೆ ಎಂದು ನೀವು ಒಪ್ಪುತ್ತೀರಿ. ಎಲ್ಲಾ ಪ್ರಸರಣಗಳನ್ನು ಗೌಪ್ಯವಲ್ಲ ಮತ್ತು ಯಾವುದೇ ಮಾಲೀಕತ್ವದಲ್ಲಿ ಇಲ್ಲ ಎಂದು ಪರಿಗಣಿಸಲಾಗುತ್ತದೆ ಮತ್ತು ಗೃಹಂ, ಅದರ ಗ್ರೂಪ್ ಕಂಪನಿಗಳು, ಅಂಗಸಂಸ್ಥೆಗಳು ಅಥವಾ ಸಹವರ್ತಿಗಳು ಅಂತಹ ಮಾಹಿತಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಜವಾಬ್ದಾರಿ ಹೊಂದಿರುವುದಿಲ್ಲ ಹಾಗೂ ಯಾವುದೇ ಮಿತಿಯಿಲ್ಲದೆ ಇತರರಿಗೆ ಆ ಪ್ರಸರಣಗಳ ಪುನರುತ್ಪಾದನೆ, ಬಳಕೆ, ಪ್ರಕಟಣೆ ಮತ್ತು ವಿತರಣೆ ಮಾಡಬಹುದು. ಜೊತೆಗೆ, ಗೃಹಂ, ಅದರ ಗ್ರೂಪ್ ಕಂಪನಿಗಳು, ಅಂಗಸಂಸ್ಥೆಗಳು ಅಥವಾ ಸಹವರ್ತಿಗಳು ಅಂತಹ ಮಾಹಿತಿಯಲ್ಲಿ ಇರುವ ಯಾವುದೇ ವಿಚಾರಗಳು, ಪರಿಕಲ್ಪನೆಗಳು, ತಿಳುವಳಿಕೆ ಅಥವಾ ತಂತ್ರಗಳನ್ನು ಯಾವುದೇ ಉದ್ದೇಶಕ್ಕಾಗಿ ಬಳಸಲು ಸ್ವತಂತ್ರವಾಗಿರುತ್ತವೆ, ಅದರಲ್ಲಿ ಅಂತಹ ಮಾಹಿತಿಯನ್ನು ಬಳಸಿ ಸೇವೆಗಳನ್ನು ಅಭಿವೃದ್ಧಿಪಡಿಸುವುದು ಅಥವಾ ಪ್ರಚಾರ ಮಾಡುವುದು ಒಳಗೊಂಡಿದೆ, ಆದರೆ ಅಷ್ಟಕ್ಕೇ ಸೀಮಿತವಾಗಿರುವುದಿಲ್ಲ.
ಈ ವೆಬ್‌ಸೈಟ್‌ಗೆ ಅಥವಾ ಈ ವೆಬ್‌ಸೈಟ್ ಮೂಲಕ ಯಾವುದೇ ಕಾನೂನುಬಾಹಿರ, ಬೆದರಿಕೆಯ, ಅಪಮಾನಕಾರಿ, ಮಾನಹಾನಿಕರ, ಪ್ರಚೋದಕ, ಅಶ್ಲೀಲ ಅಥವಾ ಅಸಭ್ಯ ವಿಷಯ ಅಥವಾ ಕಾನೂನಿನ ಅಡಿಯಲ್ಲಿ ಯಾವುದೇ ನಾಗರಿಕ ಅಥವಾ ಕ್ರಿಮಿನಲ್ ಮೊಕದ್ದಮೆಗೆ ಕಾರಣ ಆಗಬಹುದಾದ ಯಾವುದೇ ಇತರ ವಸ್ತುಗಳನ್ನು ಪೋಸ್ಟ್ ಮಾಡುವುದು ಅಥವಾ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ನೀವು ಈ ಮೂಲಕ ಒಪ್ಪಿಕೊಳ್ಳುತ್ತೀರಿ ಮತ್ತು ನಿಮಗೆ ಸೂಚನೆ ನೀಡಲಾಗುತ್ತಿದೆ. ನೀವು ಮಾಡುವ ಯಾವುದೇ ಕಾಮೆಂಟ್‌ಗಳ ವಿಷಯಕ್ಕೆ ನೀವು ಸಂಪೂರ್ಣವಾಗಿ ಜವಾಬ್ದಾರರಾಗಿರುತ್ತೀರಿ ಮತ್ತು ಅಂತಹ ವಿಷಯಗಳನ್ನು ಗೃಹಂ ಅದರ ಸ್ವಂತ ವಿವೇಚನೆಯಿಂದ ಮತ್ತು ನಿಮಗೆ ಯಾವುದೇ ಸೂಚನೆ ನೀಡದೆ ತೆಗೆದುಹಾಕಬಹುದು.
ಗೃಹಂ, ಅದರ ಗ್ರೂಪ್ ಕಂಪನಿಗಳು, ಅಂಗಸಂಸ್ಥೆಗಳು ಅಥವಾ ಸಹವರ್ತಿಗಳು ಈ ಬಳಕೆಯ ನಿಯಮಗಳನ್ನು ಈ ಪ್ರಕಟಣೆ ಅಪ್‌ಡೇಟ್ ಮಾಡುವ ಮೂಲಕ ಪರಿಷ್ಕರಿಸಬಹುದು. ಈ ನಿಯಮಗಳು ಮತ್ತು ಷರತ್ತುಗಳ ಯಾವುದೇ ಭಾಗವು ಜಾರಿಗೊಳಿಸಲಾಗದ್ದು ಎಂದು ಕಂಡುಬಂದಲ್ಲಿ, ಇನ್ನುಳಿದ ನಿಯಮಗಳು ಮತ್ತು ಷರತ್ತುಗಳು ಸಂಪೂರ್ಣ ಜಾರಿಯಲ್ಲಿರುತ್ತವೆ ಎಂಬುದನ್ನು ನೀವು ಒಪ್ಪುತ್ತೀರಿ. ಈ ವೆಬ್‌ಸೈಟ್ ಬಳಸುವ ಮೂಲಕ, ನೀವು ಅಂತಹ ಯಾವುದೇ ಪರಿಷ್ಕರಣೆಗಳಿಗೆ ಬದ್ಧರಾಗಿರಲು ಒಪ್ಪುತ್ತೀರಿ ಮತ್ತು ಆದ್ದರಿಂದ ನೀವು ಬದ್ಧರಾಗಿರುವ ಆಗಿನ ಚಾಲ್ತಿಯಲ್ಲಿರುವ ಬಳಕೆಯ ನಿಯಮಗಳನ್ನು ನಿರ್ಧರಿಸಲು ಆಗಾಗ್ಗೆ ಈ ಪೇಜ್‌ಗೆ ಭೇಟಿ ನೀಡಬೇಕು.
ವೆಬ್‌ಸೈಟ್‌ಗೆ ಭೇಟಿ ನೀಡುವವರಿಂದ ಗೃಹಂ ಸಂಸ್ಥೆಯು ಆಪರೇಟಿಂಗ್ ಸಿಸ್ಟಮ್, ಬ್ರೌಸರ್, ಡೊಮೇನ್ ಹೆಸರು ಮತ್ತು ವೆಬ್‌ಸೈಟ್‌ನಲ್ಲಿ ನಿರ್ದಿಷ್ಟವಾಗಿ ಅಕ್ಸೆಸ್ ಮಾಡಿದ ಅಥವಾ ಭೇಟಿ ನೀಡಿದ ವೆಬ್ ಪೇಜ್‌ಗಳು ಹಾಗೂ ಇತರ ಮಾಹಿತಿ ಸಂಗ್ರಹಿಸಬಹುದು. ಯಾರಾದರೂ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ, ಗೃಹಂ ಅವರ ಕಂಪ್ಯೂಟರ್‌ನಲ್ಲಿ "ಕುಕೀ" ಅಥವಾ ಅಂತಹುದೇ ಫೈಲ್ ರೂಪದಲ್ಲಿ ಕೆಲವು ಮಾಹಿತಿ ಸಂಗ್ರಹಿಸಬಹುದು ಎಂದು ವೆಬ್‌ಸೈಟ್‌ಗೆ ಭೇಟಿ ನೀಡುವವರಿಗೆ ಗೃಹಂ ತಿಳಿಸುತ್ತದೆ. ಈ ಫೈಲ್‌ಗಳು, ಗ್ರಾಹಕರು ಪಟ್ಟಿ ಮಾಡಿದ ಅಥವಾ ಹಿಂದಿನ ಆದ್ಯತೆಗಳ ಆಧಾರದಲ್ಲಿ ವೆಬ್‌ಸೈಟ್‌ನ ಹೊಂದಾಣಿಕೆ ಮಾಡಲು ಗೃಹಂಗೆ ಅವಕಾಶ ನೀಡುತ್ತವೆ. ಬಹುತೇಕ ವೆಬ್ ಬ್ರೌಸರ್‌ಗಳು ಅಳಿಸಿಹಾಕುವ, ನಿರ್ಬಂಧಿಸುವ ಅಥವಾ ಅಂತಹ ಫೈಲ್ ಸಂಗ್ರಹವಾದಾಗ ಬಳಕೆದಾರರಿಗೆ ನೋಟಿಫೈ ಮಾಡುವ ಮೂಲಕ ತಮ್ಮ ಕಂಪ್ಯೂಟರ್‌ಗಳಲ್ಲಿ ಅಂತಹ ಫೈಲ್‌ಗಳ ಮೇಲೆ ನಿಯಂತ್ರಣ ಚಲಾಯಿಸಲು ವೆಬ್ ಬಳಕೆದಾರರಿಗೆ ಅವಕಾಶ ನೀಡುತ್ತವೆ. ಈ ಕಾರ್ಯಗಳ ಬಗ್ಗೆ ತಿಳಿಯಲು ವೆಬ್‌ಸೈಟ್‌ಗೆ ಭೇಟಿ ನೀಡುವವರು ತಮ್ಮ ಬ್ರೌಸರ್‌ನ ಸೂಚನೆಗಳನ್ನು ಗಮನಿಸಬೇಕೆಂದು ಕೋರಲಾಗಿದೆ.
ಈ ವೆಬ್‌ಸೈಟ್‌ನಲ್ಲಿ ಗೃಹಂನ ಸಹಾಯಕ ಕಂಪನಿಗಳು ಮತ್ತು ಅಂಗಸಂಸ್ಥೆಗಳ ಇತರ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳು ಇರಬಹುದು. ನಿಮಗೆ ಆಸಕ್ತಿ ಇರಬಹುದಾದ ಸಂಬಂಧಿತ ವೆಬ್‌ಸೈಟ್‌ಗಳು, ಸೇವೆಗಳು ಮತ್ತು/ಅಥವಾ ಉತ್ಪನ್ನಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಹುಡುಕುವುದಕ್ಕೆ ಸಹಾಯ ಮಾಡಲು, ಗೃಹಂ ಜೊತೆ ಯಾವುದೇ ಸಂಪರ್ಕ ಇಲ್ಲದ ಥರ್ಡ್ ಪಾರ್ಟಿಗಳಿಂದ ನಿಯಂತ್ರಿಸಲ್ಪಟ್ಟ ಅಥವಾ ನೀಡಲ್ಪಟ್ಟ ಹೊರಗಿನ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳು ಸಹ ಇರಬಹುದು. ಅಂತಹ ಲಿಂಕ್ ಮಾಡಲಾದ ವೆಬ್‌ಸೈಟ್‌ಗಳಲ್ಲಿ ಕಾಣಿಸುವ ವಿಷಯಗಳು ಅಥವಾ ನೀಡಲಾದ ಉತ್ಪನ್ನಗಳು/ಸೇವೆಗಳು, ಅಥವಾ ಆ ಉತ್ಪನ್ನಗಳು/ಸೇವೆಗಳ ಯಾವುದೇ ಗುಣಮಟ್ಟವನ್ನು ಗೃಹಂ ಅನುಮೋದಿಸುವುದಿಲ್ಲ, ಪರಿಶೀಲಿಸುವುದಿಲ್ಲ, ಅಥವಾ ಮೇಲ್ವಿಚಾರಣೆ ಮಾಡುವುದಿಲ್ಲ. ಅಂತಹ ಹೊರಗಿನ ವೆಬ್‌ಸೈಟ್‌ಗಳ ಮಾಲೀಕರು ಅಥವಾ ನಿರ್ವಾಹಕರ ಬಗ್ಗೆ ಅಥವಾ ಅವರು ಪೂರೈಸುವ ಯಾವುದೇ ಉತ್ಪನ್ನಗಳು ಅಥವಾ ಸೇವೆಗಳ ಬಗ್ಗೆ ಅಥವಾ ಅವರ ವೆಬ್‌ಸೈಟ್‌ಗಳ ವಿಷಯಗಳ ಬಗ್ಗೆ ಗೃಹಂ ಜವಾಬ್ದಾರವಲ್ಲ ಹಾಗೂ ಇವುಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರತ್ಯಕ್ಷ ಅಥವಾ ಪರೋಕ್ಷವಾದ ಷರತ್ತುಗಳು, ವಾರಂಟಿಗಳು ಅಥವಾ ಇತರೆ ನಿಯಮಗಳು ಅಥವಾ ನಿರೂಪಣೆಗಳನ್ನು ಗೃಹಂ ನೀಡುವುದಿಲ್ಲ ಅಥವಾ ಅವುಗಳಿಗೆ ಪ್ರವೇಶಿಸುವುದಿಲ್ಲ ಅಥವಾ ಇವುಗಳಿಗೆ ಸಂಬಂಧಿಸಿದಂತೆ ಯಾವುದೇ ಹೊಣೆಗಾರಿಕೆಯನ್ನು ಗೃಹಂ ಒಪ್ಪಿಕೊಳ್ಳುವುದಿಲ್ಲ (ಈ ವೆಬ್‌ಸೈಟ್‌ನಲ್ಲಿ ಇರುವ ಯಾವುದೇ ಹೊರಗಿನ ವೆಬ್‌ಸೈಟ್‌ನ ವಿಷಯವು ಯಾವುದೇ ಥರ್ಡ್ ಪಾರ್ಟಿಯ ಬೌದ್ಧಿಕ ಪ್ರಾಪರ್ಟಿ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬ ಯಾವುದೇ ಕ್ಲೇಮ್‌ನಿಂದ ಉಂಟಾಗುವ ಯಾವುದಾದರೂ ಹೊಣೆಗಾರಿಕೆಯೂ ಸೇರಿದಂತೆ).
ಯಾವುದೇ ನ್ಯಾಯವ್ಯಾಪ್ತಿಯ ಕಾನೂನುಗಳಿಂದ ಸೂಚಿಸಲಾದ ಯಾವುದೇ ಪರೋಕ್ಷ ವಾರಂಟಿಗಳನ್ನು ಗೃಹಂ ಈ ಮೂಲಕ ಸ್ಪಷ್ಟವಾಗಿ ನಿರಾಕರಿಸುತ್ತದೆ. ಎಲ್ಲಾ ವಿವಾದಗಳು ಮತ್ತು ಕಾನೂನು ಪ್ರಕರಣಗಳು ಹಾಗೂ ಸಮಸ್ಯೆಗಳು ಭಾರತದ ಪುಣೆ ನ್ಯಾಯಾಲಯಗಳ ನ್ಯಾಯವ್ಯಾಪ್ತಿಗೆ ಮಾತ್ರ ಒಳಪಟ್ಟಿರುತ್ತವೆ. ಎಲ್ಲಾ ವಿವಾದಗಳನ್ನು ನಿಯಮಗಳು ಮತ್ತು ಷರತ್ತುಗಳಲ್ಲಿ ಒದಗಿಸಿದಂತೆ ಮಧ್ಯಸ್ಥಿಕೆಗೆ ವಹಿಸಲಾಗುತ್ತದೆ.
ಗೃಹಂ ತನ್ನ ಸ್ವಂತ ವಿವೇಚನೆಯ ಮೇರೆಗೆ ಮತ್ತು ನಿಮಗೆ ಯಾವುದೇ ಪೂರ್ವ ಸೂಚನೆ ನೀಡದೆ, ಯಾವುದೇ ಅನ್ವಯವಾಗುವ ಕಾನೂನು, ನಿಯಂತ್ರಣ, ಕಾನೂನು ಪ್ರಕ್ರಿಯೆ ಅಥವಾ ಸರ್ಕಾರಿ ಕೋರಿಕೆಯನ್ನು ಪೂರೈಸಲು ಅಗತ್ಯವಿರುವ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವ ಹಕ್ಕನ್ನು ಅಥವಾ ಯಾವುದೇ ಮಾಹಿತಿ ಅಥವಾ ಉತ್ಪನ್ನಗಳು ಅಥವಾ ಸೇವೆಗಳನ್ನು, ಸಂಪೂರ್ಣವಾಗಿ ಅಥವಾ ಭಾಗಶಃ, ಎಡಿಟ್ ಮಾಡುವ, ಪ್ರಕಟಿಸಲು ನಿರಾಕರಿಸುವ ಅಥವಾ ತೆಗೆದುಹಾಕುವ ಹಕ್ಕನ್ನು ಯಾವಾಗಲೂ ಕಾಯ್ದಿರಿಸುತ್ತದೆ.
ಇಲ್ಲಿ ಒದಗಿಸಿದಂತೆ ನಿಮ್ಮ ಸಲ್ಲಿಕೆಗಳ ಬಳಕೆಗೆ ಸಂಬಂಧಿಸಿದಂತೆ ಯಾವುದೇ ಪರಿಹಾರವನ್ನು ಪಾವತಿಸಲಾಗುವುದಿಲ್ಲ. ನೀವು ಒದಗಿಸಬಹುದಾದ ಯಾವುದೇ ಸಲ್ಲಿಕೆಯ ಪ್ರಕಟಣೆ ಅಥವಾ ಬಳಕೆ ಮಾಡಲು ಗೃಹಂ ಯಾವುದೇ ಬಾಧ್ಯತೆ ಹೊಂದಿರುವುದಿಲ್ಲ ಮತ್ತು ಗೃಹಂನ ಸ್ವಂತ ವಿವೇಚನೆಯ ಮೇರೆಗೆ ಯಾವುದೇ ಸಮಯದಲ್ಲಿ ಯಾವುದೇ ಸಲ್ಲಿಕೆಯನ್ನು ತೆಗೆದುಹಾಕಬಹುದು.
ನಿಮ್ಮ ಸಲ್ಲಿಕೆಯ ಪ್ರಕಟಣೆ, ಅಪ್‌ಲೋಡ್, ಇನ್‌ಪುಟ್, ನೀಡುವಿಕೆ, ಅಥವಾ ಸಲ್ಲಿಸುವಿಕೆ ಮೂಲಕ, ಈ ವಿಭಾಗದಲ್ಲಿ ವಿವರಿಸಿದಂತೆ ನಿಮ್ಮ ಸಲ್ಲಿಕೆಯ ನೀಡುವಿಕೆ, ಪ್ರಕಟಣೆ, ಅಪ್‌ಲೋಡ್, ಇನ್‌ಪುಟ್ ಅಥವಾ ಸಲ್ಲಿಕೆ ಮಾಡಲು ನಿಮಗೆ ಅಗತ್ಯವಿರುವ ಎಲ್ಲಾ ಹಕ್ಕುಗಳು ಸೇರಿದಂತೆ ಆದರೆ ಅವುಗಳಿಗೆ ಸೀಮಿತವಾಗದಂತೆ ನಿಮ್ಮ ಸಲ್ಲಿಕೆಯ ಎಲ್ಲಾ ಹಕ್ಕುಗಳನ್ನು ನೀವು ಹೊಂದಿರುತ್ತೀರಿ ಅಥವಾ ನಿಯಂತ್ರಿಸುತ್ತೀರಿ ಎಂದು ನೀವು ಖಾತರಿಪಡಿಸುತ್ತೀರಿ ಮತ್ತು ಪ್ರತಿನಿಧಿಸುತ್ತೀರಿ.
ಸಂವಹನ ಸೇವೆಯ ಮೂಲಕ ಅಂತಿಮ ಬಳಕೆದಾರರು ಲಭ್ಯವಾಗುವಂತೆ ಮಾಡುವ ಸಾಫ್ಟ್‌ವೇರ್ ಹೊರತುಪಡಿಸಿ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲು ಲಭ್ಯವಿರುವ ಯಾವುದಾದರೂ ಸಾಫ್ಟ್‌ವೇರ್ (ಇದ್ದರೆ) (“ಸಾಫ್ಟ್‌ವೇರ್”) ಅದು ಆ ಸಾಫ್ಟ್‌ವೇರ್ ಪೂರೈಕೆದಾರರ ಅಂತಿಮ ಕೃತಿ ಆಗಿರುತ್ತದೆ. ಆ ಸಾಫ್ಟ್‌ವೇರ್ ಜೊತೆಗೆ ಬರುವ ಅಥವಾ ಅದರಲ್ಲಿ ಸೇರಿಸಲಾದ ಯಾವುದಾದರೂ ಅಂತಿಮ ಬಳಕೆದಾರ ಪರವಾನಗಿ ಒಪ್ಪಂದದ ("ಪರವಾನಗಿ ಒಪ್ಪಂದ") ನಿಯಮಗಳಿಂದ ನಿಮ್ಮ ಸಾಫ್ಟ್‌ವೇರ್ ಬಳಕೆಯು ನಿಯಂತ್ರಿಸಲ್ಪಡುತ್ತದೆ. ನೀವು ಪರವಾನಗಿ ಒಪ್ಪಂದದ ನಿಯಮಗಳಿಗೆ ಒಪ್ಪದ ಹೊರತು, ಪರವಾನಗಿ ಒಪ್ಪಂದದ ಜೊತೆಗೆ ಬರುವ ಅಥವಾ ಅದನ್ನು ಒಳಗೊಂಡಿರುವ ಯಾವುದೇ ಸಾಫ್ಟ್‌ವೇರ್ ಅನ್ನು ನೀವು ಇನ್‌ಸ್ಟಾಲ್ ಮಾಡಲು ಅಥವಾ ಬಳಸಲು ಸಾಧ್ಯವಿಲ್ಲ.
ಗೃಹಂ ತನ್ನ ಸ್ವಂತ ವಿವೇಚನೆಯ ಮೇರೆಗೆ, ಯಾವುದೇ ಸಮಯದಲ್ಲಿ, ಸೂಚನೆ ನೀಡದೆ, ವೆಬ್‌ಸೈಟ್ ಮತ್ತು ಸಂಬಂಧಿತ ಸೇವೆಗಳು ಅಥವಾ ಅದರ ಯಾವುದೇ ಭಾಗಕ್ಕೆ ನಿಮ್ಮ ಅಕ್ಸೆಸ್ ನಿಲ್ಲಿಸುವ ಹಕ್ಕನ್ನು ಕಾಯ್ದಿರಿಸಿದೆ.
ಗೃಹಂ, ಅದರ ಗ್ರೂಪ್ ಕಂಪನಿಗಳು, ಸರಬರಾಜುದಾರರು, ಸೇವಾ ಪಾಲುದಾರರು, ಏಜೆಂಟರು, ನೌಕರರು, ಪರವಾನಗಿದಾರರು, ಸಲಹೆಗಾರರು, ಅಧಿಕಾರಿಗಳು ಮತ್ತು ನಿರ್ದೇಶಕರು ಈ ವೆಬ್‌ಸೈಟ್‌ನ ಅಥವಾ ಯಾವುದೇ ಸಂಪರ್ಕಿತ ಜಾಲತಾಣದ ನಿಮ್ಮ ಬಳಕೆಯಿಂದ ಅಥವಾ ಯಾವುದೇ ಪಾರ್ಟಿಯು ಅದನ್ನು ಬಳಸಲು ಅಸಮರ್ಥ ಆಗುವುದರಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉಂಟಾಗುವ ಯಾವುದೇ ನಷ್ಟ ಅಥವಾ ಹಾನಿಗೆ ಯಾವುದೇ ಹೊಣೆಗಾರಿಕೆ ಸ್ವೀಕರಿಸುವುದಿಲ್ಲ ಮತ್ತು ಹೊಣೆಗಾರರಾಗಿರುವುದಿಲ್ಲ (ವಿಶೇಷ, ಆಕಸ್ಮಿಕ ಅಥವಾ ಪರಿಣಾಮಕಾರಿಯಾದ, ದಂಡನಾತ್ಮಕ, ಅಥವಾ ನಿದರ್ಶನೀಯ ನಷ್ಟ, ಹಾನಿ ಅಥವಾ ವೆಚ್ಚಗಳು, ನಷ್ಟವಾದ ಆದಾಯ ಅಥವಾ ಲಾಭಗಳು, ವ್ಯಾಪಾರ ನಷ್ಟ ಅಥವಾ ಡೇಟಾ ನಷ್ಟ ಸೇರಿದಂತೆ) ಹಾಗೂ ಈ ನಷ್ಟ, ಹಾನಿ ಅಥವಾ ವೆಚ್ಚವು ಈ ವೆಬ್‌ಸೈಟ್, ಅದರ ವಿಷಯಗಳು ಅಥವಾ ಸಂಬಂಧಿತ ಸೇವೆಗಳಲ್ಲಿನ ಯಾವುದೇ ದೋಷ, ತಪ್ಪು, ಲೋಪ, ಅಡಚಣೆ, ಅಪೂರ್ಣತೆ, ದೋಷಪೂರಿತತೆ, ಪ್ರಮಾದ ಅಥವಾ ನಿಖರತೆಯ ಕೊರತೆಯಿಂದ, ಅಥವಾ ವೆಬ್‌ಸೈಟ್‌ನ ಅಥವಾ ಅದರ ಯಾವುದೇ ಭಾಗದ ಅಥವಾ ಯಾವುದೇ ವಿಷಯಗಳು ಅಥವಾ ಸಂಬಂಧಿತ ಸೇವೆಗಳ ಲಭ್ಯತೆಯ ಕೊರತೆಯಿಂದ ಉಂಟಾಗಿದ್ದರೂ, ಮತ್ತು ಈ ಘಟಕಗಳಿಗೆ ಅಂತಹ ಹಾನಿ, ನಷ್ಟಗಳು ಅಥವಾ ವೆಚ್ಚಗಳ ಸಾಧ್ಯತೆಯ ಬಗ್ಗೆ ಸಲಹೆ ನೀಡಿದ್ದರೂ ಸಹ, ಅದು ಹೇಗೆ ಉದ್ಭವಿಸಿದರೂ ಮತ್ತು ಅವುಗಳಿಗೆ ಸೀಮಿತವಾಗಿಲ್ಲದಿದ್ದರೂ ಕೂಡಾ, ಈ ಘಟಕಗಳು ಯಾವುದೇ ಹೊಣೆಗಾರಿಕೆ ಸ್ವೀಕರಿಸುವುದಿಲ್ಲ.